ಎಥಿಲೀನ್ ಆಕ್ಸೈಡ್ (CH2..CH2) ಒಂದು ಸಾವಯವ ಸಂಯುಕ್ತ. ಇದಕ್ಕೆ ಎಪಾಕ್ಸಿ ಈಥೇನ್, ಆಕ್ಸಿರಾನ್ ಎಂಬ ಹೆಸರುಗಳೂ ಇವೆ. == ತಯಾರಿಕೆ == ಕ್ಲೋರಿನ್ ಕರಗಿಸಿದ ನೀರಿಗೆ 0೦ ಸೆ. ಉಷ್ಣತೆಯಲ್ಲಿ ಎಥಿಲೀನ್ ಅನಿಲವನ್ನು ಹಾಯಿಸಿ ಉತ್ಪತ್ತಿಯಾದ ಎಥಿಲೀನ್ ಕ್ಲೋರೊಹೈಡ್ರೀನನ್ನು ಸುಣ್ಣದೊಂದಿಗೆ ಬಟ್ಟಿ ಇಳಿಸಿ ಎಥಿಲೀನ್ ಆಕ್ಸೈಡ್ ತಯಾರಿಸುತ್ತಾರೆ. CH2=CH2 + → CICH2-CH2OH 2 − 2 → 2 ⋅ ⋅ 2 {\ {\ {ClCH2-CH2OH ->[] CH2..CH2}}} ಸುಣ್ಣ ಎಥಿಲೀನ್ ಮತ್ತು ಗಾಳಿಯ ಮಿಶ್ರಣವನ್ನು ಒತ್ತಡದಲ್ಲಿ 2000-4000 ಸೆ. ಉಷ್ಣತೆಗೆ ಕಾಯಿಸಿದ ಬೆಳ್ಳಿಯ ಮೇಲೆ ಹಾಯಿಸುವುದು ಈಚೆಗೆ ಬಳಕೆಗೆ ಬಂದಿರುವ ಇನ್ನೊಂದು ವಿಧಾನ. == ಗುಣಗಳು == ಎಥಿಲೀನ್ ಆಕ್ಸೈಡ್ ಬಣ್ಣವಿಲ್ಲದ ಅನಿಲ. ಇದರ ಕುದಿಬಿಂದು ೧೪೦ ಸೆ. ನೀರಿನಲ್ಲಿ ಆಲ್ಕೊಹಾಲಿನಲ್ಲಿ ಮತ್ತು ಈಥರಿನಲ್ಲಿ ಇದು ದ್ರಾವ್ಯ. ನೀರಿನೊಡನೆ 2000 ಸೆ. ಉಷ್ಣತೆಯಲ್ಲಿ ವರ್ತಿಸಿ ಇದು ಗ್ಲೈಕಾಲನ್ನು ಉತ್ಪತ್ತಿ ಮಾಡುತ್ತದೆ. 2 ⋅ ⋅ 2 → 2 2 − 2 {\ {\ {CH2..CH2 ->[H_2O] HOCH2-CH2OH}}} ಮೀಥೈಲ್ ಅಥವಾ ಈಥೈಲ್ ಆಲ್ಕೊಹಾಲುಗಳೊಡನೆ ವರ್ತಿಸಿ ಇದು ಮೀಥೈಲ್ ಸೆಲೊಸಾಲ್ವ್ (.CH2-CH2--CH3) ಮತ್ತು ಈಥೈಲ್ ಸೆಲೊಸಾಲ್ವ್ (.CH2-CH2--C2H5) ಎಂಬ ದ್ರವ ಸಂಯುಕ್ತಗಳನ್ನು ಉತ್ಪತ್ತಿ ಮಾಡುತ್ತದೆ. ಈ ಸೆಲೊಸಾಲ್ವುಗಳಲ್ಲಿ ಸೆಲುಸೋಸ್ ಕರಗಬಲ್ಲದು. == ಉಪಯೋಗಗಳು == ಇದು ಒಳ್ಳೆಯ ಕೀಟನಾಶಕ. ಅನೇಕ ಸಾವಯವ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಇದನ್ನು ಬಳಸುತ್ತಾರೆ. ಕೃತಕ ರಬ್ಬರ್ ತಯಾರಿಕೆಗೆ ಅಗತ್ಯವಾದ ರಾಸಾಯನಿಕಗಳಲ್ಲಿ ಒಂದಾದ ಅಕ್ರಿಲೊನೈಟ್ರಿಲ್ (CH2=.) ಎಥಿಲೀನ್ ಆಕ್ಸೈಡಿನಿಂದ ತಯಾರಿಸುವ ಪ್ರಮುಖ ಉತ್ಪನ್ನಗಳಲ್ಲೊಂದು. == ಉಲ್ಲೇಖಗಳು: ==